Friday, February 11, 2011

ಇಬ್ಬನಿ...

ಇಬ್ಬನಿ ಬದುಕಿನ ಮುಂಜಾನೆ ಆವರಿಸಿದ ಸಂತಸವೆಂಬ ಇಬ್ಬನಿ;
ಮನಸ್ಸಿನ ಪುಟದಲ್ಲಿ ಮೂಡುವ ಆಸೆಯೆಂಬ ಇಬ್ಬನಿ;
ಕತ್ತಲೆ ನಡುವೆ ಬೆಳಕೆಂಬ ಇಬ್ಬನಿ;
ಕಷ್ಟವ ತೊಳೆವ ಸಂತಸವೆಂಬ ಇಬ್ಬನಿ;
ನೋವನು ನಿವಾರಿಸುವ ನಲಿವೆಂಬ ಇಬ್ಬನಿ;
ಅಸುಂದರತೆಯ ತೋರೆವ ಸುಂದರತೆಯ ಇಬ್ಬನಿ;
ಮೂಡುತ್ತಿರಲಿ ಇಬ್ಬನಿ ಹೀಗೆಯೇ ಮನಸ್ಸೆಂಬ ಚಿಗುರೆಲೆಯ ಮೇಲೆ, ಮುಂಜಾನೆಯ ಜೇಡರ ಬಲೆಯ ಮೇಲಿನ ಇಬ್ಬನಿಯಂತೆ, ಬಾರದಿರಲಿ ಕಂಬನಿ, ಮೂಡುತ್ತಿರಲಿ ಇಬ್ಬನಿ ಮನಸ್ಸೆಂಬ ಚಿಗುರೆಲೆಯ ಮೇಲೆ..........

1 comment:

 1. yes...
  ಬಾರದಿರಲಿ ಕಂಬನಿ...
  ಸದಾ ಇರಲಿ ಇಬ್ಬನಿ...
  ಇಬ್ಬನಿ ತಬ್ಬಿದ ಇಳೆಯಂಥ ಮನಸಲ್ಲಿ ನಗೆಯ ರವಿಕಿರಣ ಮಿನುಗುತಿರಲಿ ಸದಾ ಸರ್ವದಾ...
  ಬರವಣಿಗೆ ಮುಂದುವರೆಯಲಿ. ಓದುವ ಖುಷಿ ನಮ್ಮದಾಗಲಿ..

  ReplyDelete