Monday, March 14, 2011

ನೆನಪು

ಚಿಕ್ಕ ಚಿಕ್ಕ ಸಮುದ್ರದ ಅಲೆಗಳೇ ದೊಡ್ಡ ತೆರೆಯಾಗಿ ಸಮುದ್ರದ ತೀರವನ್ನು ಅಪ್ಪಳಿಸುವುದು, ನಮ್ಮೆಲ್ಲರ ಹಿಂದಿನ ಸಂತೋಷದ ಮತ್ತು ದಃಖ ತಪ್ತ ಭಾವನೆಯ ಹಿಂದಿನ ಕಾರಣ ಬಹುಶಃ ಹಿಂದಿನ ನೆನಪೆ ಇರಬೇಕು. ನೆನಪು ಕೆಲವೊಮ್ಮೆ ಸಂತೋಷವನ್ನು ಇನ್ನೊಮ್ಮೆ ದುಃಖದ ಅನುಭೂತಿಯನ್ನು ಉಣಬಡಿಸುತ್ತದೆ. ದುಃಖ ಯಾವಾಗಲೂ ಮರೆಯದ ನೆನಪಾಗಿಯೇ ಕಾಡುತ್ತದೆ.
ನನ್ನ ಸ್ತೇಹಿತನೊಬ್ಬನಿದ್ದ  ಆತ ಯಾವಾಗಲೂ ನಗುತ್ತಾ, ನಗಿಸುತ್ತಾ, ತನ್ನ ಸುತ್ತಲಿನವರನ್ನು ನಗಿಸುತ್ತಾ ಸದಾ ಸಂತೋಷವಾಗಿಡುತ್ತಿದ್ದ, ಆದರೆ ಆತ ಕಾಲನ ಕೆರೆಗೆ ಓಗೊಟ್ಟು ಯಾರಿಗೂ ಹೇಳದೆ ಬದುಕಿನ ದಾರಿಯಲ್ಲಿ ಮರಳಿ ಬಾರದ ಲೋಕದೆಡೆಗೆ ನಡೆದು ಹೋದ. ನಾನು ಆತನೊಂದಿಗೆ ಕಳೆದ ಪ್ರತಿಯೊಂದು ಘಟನೆಯೂ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಹಾಗೇ ಉಳಿದಿದೆ, ಪ್ರತಿಯೊಂದು ಘಟನೆಯೂ ಅಳಿಸದಂತೆ ದಾಖಲಾಗಿದೆ. ಆತ ಹೇಳಿದ ಪ್ರತಿಯೊಂದು ಡೈಲಾಗ್ ಈಗಷ್ಟೆ ಕೇಳಿದಂತೆ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ. ಹುಟ್ಟಿದ ಪ್ರತಯೊಬ್ಬ ಮನುಷ್ಯ ಸಾಯಲೇಬೇಕು ಎಂಬುದು ಅಂಗೈ ಹುಣ್ಣಿನಷ್ಟ ಸತ್ಯವಾದರೂ ಸಹ ಸಾವಿನ ಕರಾಳತೆಯನ್ನು  ಮರೆಯುವುದು ಅಷ್ಟು ಸುಲಭವಲ್ಲ.
ನನ್ನನ್ನೂ ಕಾಡುವುದು ಈ ನೆನಪುಗಳು ಹಿಗೇಕೆ ?ಸಂತೋಷದ ನೆನಪುಗಳು ಚಿರಸ್ಥಾಯಿಯಾಗಿರುವುದು ಬೆರಳೆಣಿಕೆಯಷ್ಟು ಆದರೆ ನಾನು ಅನುಭವಿಸಿದ ಅವಮಾನ, ಜೋತೆಗಿರುವವರ ಕುಚೋದ್ಯ ಪ್ರತಿಯೊಂದು ಹಸಿಹಸಿಯಾಗಿ ನೆನಪಿದೆ. ಕೆಟ್ಟ ನೆನಪುಗಳು ಮಾಸುವುದಿಲ್ಲ. ಒಳ್ಳೆಯ ನೆನಪುಗಳು ಶಾಶ್ವತವಾಗಿ ಉಳಿಯುವುದಿಲ್ಲ ಮರೆವು ಇದ್ದೇನು ಪ್ರಯೋಜನ.


ಕನ್ನಡದ ಖ್ಯಾತ ಕವಿ ಎನ್.ಎಸ್. ಲಕ್ಷ್ಮೀನಾರಯಣ ಭಟ್ಟರ ಕವಿತೆಯ ಸಾಲುಗಳು ಇಲ್ಲಿ ಉಲ್ಲೇಖನೀಯ;
ಜೀವ ಭಾವ ಹೆಗಲ ಹೂಡಿ:
ನೋವು ನಲಿವ ಕೀಲ ಮಾಡಿ;
ಸಾಗುತಿಹುದು ಜೀವನ ಗಾಡಿ;
ಮೇಲು ಕೀಳು ಎನುವುದುಂಟೆ;
ಹಳಿದು ಉಳಿವ ಹಮ್ಮು ಉಂಟೆ;
ಬದುಕೆ ಸಾವಿನ ಒಲೆಯ ಕುಂಟೆ;
ಇಷ್ಟು ಕಷ್ಟ ಏಕೆ ದೂರು?;
ಈ ಭೂಮಿ ನಾಲ್ಕು ದಿನದ ಊರು;
ತಾಳಿ ನಿಂತು ಮುಂದೆ ಸಾಗು;
ಬಯಕೆ ಜನಿಸೆ ನಾಕ ನರಕ;
ಸಾಕು ಬೇಕು ಎಂಬ ತವಕ;
ಇರುಳು ಬಂದು ಕವಿವ ತನಕ;
"ಅಮ್ಮನಿಂದ ತಿಂದ ಪ್ರೀತಿಯ ಪೆಟ್ಟು ನೆನಪಿನಲ್ಲಿರುವುದಿಲ್ಲ, ಮಲತಾಯಿಯಿಂದ ತಿಂದ ದ್ವೇಷದ ಹೊಡೆತ ಮರೆಯಲು ಸಾಧ್ಯವಿಲ್ಲ" ಎಂಬ ಮಾತು ಎಲ್ಲೊ ಓದಿದ ನೆನಪು;
ತೊರೆಯ ಹರಿವಿಗೆ ಬದುವಿನ ನೆನಪು;
ಹಸಿರ ನೇಸರಕೆ ಕುಡಿ ಚಿಗರ ನೆನಪು;
ತಾಯ ಒಡಲಿಗೆ ಶೈಶ ಮಗುವಿನ ನೆನಪು;
ಮೇಘಕ್ಕೆ ಘನಬಿಂದುವಿನ ನೆನಪು;
ನವ ವಧು-ವರರಿಗೆ ಮೊದಲ ರಾತ್ರಿಯ ನೆನಪು;
ಸಾಗರಕೆ ತೀರವನ್ನಪ್ಪಳಿಸಿದ ನೆನಪು;
ನೆನಪೆಂಬುದೇ ಹೀಗೆ ಅವರವರ ಭಾವಕ್ಕೆ ಅವರವರ ಕಲ್ಪನೆಗೆ, ಕೆಲವೊಮ್ಮೆ ಅಳಿಯದೇ, ಕೆಲವೊಮ್ಮೆ ಅಚ್ಚಳಿಯದೇ;
ಸಮುದ್ರದಂಚಿನ ಉಸುಕಿನ ಮೇಲೆ ಬರೆದ ಅಕ್ಷರದಂತೆ;
ಮರೆಯಾಗುತ್ತದೆ ಹಳೆತು, ಮೂಡುತ್ತದೆ ಹೊಸತು, ನೆನಪಿಗಿಲ್ಲ ಹದ್ದು ಅದೊಂದು ವಿಸ್ತಾರದ ಹರವು.
ನೆನಪೆಂಬ ಅನಂತತೆ ಬೋರ್ಗರೆಯಲಿ, ಜೋಗದ ಜಲಪಾತದಂತೆ:



4 comments:

  1. "ಕೆಟ್ಟ ನೆನಪುಗಳು ಮಾಸುವುದಿಲ್ಲ,ಒಳ್ಳೆಯ ನೆನಪುಗಳು ಶಾಶ್ವತವಾಗಿ ಉಳಿಯುವುದಿಲ್ಲ,ಮರೆವು ಇದ್ದೇನು ಪ್ರಯೋಜನ" - ಬರಹವನ್ನು ಕಷ್ಟಪಟ್ಟು ರೂಡಿಸಿಕೊಳ್ಳುವ ಸಣ್ಣ ಹಪ-ಹಪಿಗೆ ಜಯವಾಗಲಿ.......

    ReplyDelete
  2. ನೆನಪೆಂಬುದೇ ಹೀಗೆ ಅವರವರ ಭಾವಕ್ಕೆ ಅವರವರ ಕಲ್ಪನೆಗೆ, ಕೆಲವೊಮ್ಮೆ ಅಳಿಯದೇ, ಕೆಲವೊಮ್ಮೆ ಅಚ್ಚಳಿಯದೇ...
    ಆ ನೆನಪುಗಳೇ ಬರವಣಿಗೆಯ ಸ್ಫೂರ್ತಿ ಸೆಲೆಗಳು...
    ಹೀಗೆ ಸಾಗಲಿ ಪಯಣ...

    ReplyDelete
  3. Replies
    1. ಮೆಚ್ಚುಗೆಗಳು ಮರುಭೂಮಿಯ ಓಯಸಿಸ್ ನಂತೆ, ಧನ್ಯವಾದಗಳು

      Delete